KPSC KAS Recruitment 2026: 319 Gazetted Probationers ಹುದ್ದೆಗಳ ನೇಮಕಾತಿ – ಅರ್ಹತೆ, ಅರ್ಜಿ, ಕೊನೆಯ ದಿನಾಂಕ

ಕರ್ನಾಟಕ ಲೋಕ ಸೇವಾ ಅಯೋಗವು 2026-2027 ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಸರ್ಕಾರಿ ಹುದ್ದೆ ಗೆಜೆಟೆಡ್ ಮಟ್ಟದಲ್ಲಿ ಕಾರ್ಯ ನಿರ್ವಹಣೆ ಮಾಡುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಲಿದೆ. ಈ ಬಾರಿ ಗ್ರೂಪ್ A, ಮತ್ತು B ವೃಂದಗಳು ಸೇರಿ ಒಟ್ಟು 319 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆದವರಿಗೆ ಉತ್ತಮ ವೇತನ ಹಾಗೂ ಸೌಲಭ್ಯ ದೊರೆಯುತ್ತದೆ.

ಈ ಪೋಸ್ಟ್ ನಲ್ಲಿ ಹುದ್ದೆಗಳ ವಿವರ , ವಯೋಮಿತಿ, ಅರ್ಹತೆ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗುವುದು.

KPSC KAS Recruitment 2026 -Over view.

  • ನೇಮಕಾತಿ ಸಂಸ್ಥೆ – ಕರ್ನಾಟಕ ಲೋಕ ಸೇವಾ ಆಯೋಗ.
  • ಹುದ್ದೆಯ ಹೆಸರು – ಗೆಜೆಟೆಡ್ ಆಫೀಸರ್ಸ್
  • ಹುದ್ದೆಗಳ ಸಂಖ್ಯೆ – 319
  • ಉದ್ಯೋಗ ಸ್ಥಳ -ಕರ್ನಾಟಕ
  • ಆಯ್ಕೆ ವಿಧಾನ -ಸ್ಪರ್ಧಾತ್ಮಕ ಪರೀಕ್ಷೆ

ಹುದ್ದೆಗಳ ವಿವರ.

ಕರ್ನಾಟಕ ಲೋಕ ಸೇವಾ ಆಯೋಗವು 2026-27 ಸಾಲಿನಲ್ಲಿ ಸ್ಥಳೀಯ ಮತ್ತು ಹೈದರಬಾದ್ ಕರ್ನಾಟಕ ಸೇರಿ ಒಟ್ಟು 319 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದೆ.

  • ಸಹಾಯಕ ಆಯುಕ್ತರು -39
  • ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು – 50
  • ಸಹಾಯಕ ನಿರ್ದೇಶಕರು -02
  • ಕಾರ್ಯ ನಿರ್ವಾಹಕ ಅಧಿಕಾರಿ ಪಂಚಾಯತ್ ರಾಜ್ – 15
  • ಸಹಾಯಕ ನಿರ್ದೇಶಕರು – 11
  • ತಹಸೀಲ್ದಾರ್ – 25
  • ವಾಣಿಜ್ಯ ತೆರಿಗೆ ಅಧಿಕಾರಿ -74.
  • ಸಹಾಯಕ ಅದೀಕ್ಷರು – 06
  • ಸಹಕಾರ ಸಂಘಗಳ ಸಹಾಯಕ ನಿಬಂಧಕಾರು – 21
  • ಸಹಾಯಕ ನಿರ್ದೇಶಕರು – 12
  • ಅಬಕಾರಿ ಉಪ ಅದೀಕ್ಷಕಾರು – 05
  • ಉದ್ಯೋಗಧಿಕಾರಿ – 03
  • ಮುಖ್ಯಧಿಕಾರಿ – 20
  • ಸಹಾಯಕ ಖಜಾನೆ ಅಧಿಕಾರಿ – 12
  • ಶಾಖಾಧಿಕಾರಿ -, 05
  • ಶಾಖಾಧಿಕಾರಿ -11
  • ಸಹಾಯಕ ನಿರ್ದೇಶಕರು – 11

ವಯೋಮಿತಿ.

Kpsc ಹೊರಡಿಸಿರುವ ಅಧಿಸೂಚನೆ ಪ್ರಕಾರ ನಿಗದಿ ಪಡಿಸಿದ ವಯೋಮಿತಿ ಹೊಂದಿರಬೇಕು.ಸರ್ಕಾರ ಆದೇಶ ಹೊರಡಿಸಿರುವ ಆದೇಶದ ಪ್ರಕಾರ ಒಂದು ಬಾರಿಗೆ ಮಾತ್ರ 05 ವರ್ಷ ವಯೋಮಿತಿ ಸಡಿಲಿಕೆ ಮಾಡಿದೆ.ಕನಿಷ್ಠ ವಯೋಮಿತಿ 21 ವರ್ಷ ತುಂಬಿರಬೇಕು.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 40 ವರ್ಷ
  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 43 ವರ್ಷ
  • ಪರಿಷಿಷ್ಠ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ -45 ವರ್ಷ

ಶೈಕ್ಷಣಿಕ ಅರ್ಹತೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆ ಹೊಂದಿರಬೇಕು.ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಸ್ನಾತಕ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಪ್ರಯತ್ನಗಳು.

ಸಾಮಾನ್ಯ ವರ್ಗದವರಿಗೆ – 05 ಬಾರಿ

ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 07 ಬಾರಿ

Sc/St ಅಭ್ಯರ್ಥಿಗಳಿಗೆ – ಮಿತಿ ಇಲ್ಲ

ಆಯ್ಕೆ ಪ್ರಕ್ರಿಯೆ.

ಅಭ್ಯರ್ಥಿಗಳನ್ನು 3 ಹಂತಗಳಲ್ಲಿ ಆಯ್ಕೆ ಮಾಡಲಾಗುವುದು.

1.ಪೂರ್ವಭಾವಿ ಪರೀಕ್ಷೆ – ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲು ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಯು 2 ಪತ್ರಿಕೆಗಳನ್ನು ಹೊಂದಿದೆ. ಪ್ರತಿ ಪತ್ರಿಕೆಯಲ್ಲಿ 100 ಅಂಕಗಳನ್ನು ಹೊಂದಿದೆ. ತಪ್ಪು ಉತ್ತರಗಳಿಗೆ 0.35 ಅಂಕಕಳೆಯಲಾಗುವುದು. ಇದು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದು ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿದೆ.ಇದರಲ್ಲಿ ಅರ್ಹತೆ ಹೊಂದಿದವರನ್ನ ಮುಖ್ಯ ಪರೀಕ್ಷೆ ಗೆ ಆಯ್ಕೆ ಮಾಡಲಾಗುವುದು.

2.ಮುಖ್ಯ ಪರೀಕ್ಷೆ -ಪೂರ್ವ ಭಾವಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು.ಇದು ವಿವರತ್ಮಕ ಮಾದರಿಯಲ್ಲಿ ಇರುತ್ತದೆ. ಇದರಲ್ಲಿ 4 ಪತ್ರಿಕೆ ಹೊಂದಿದ್ದು, ಪ್ರಬಂಧ, ಸಾಮಾನ್ಯ ಜ್ಞಾನ ಪತ್ರಿಕೆಗಳು ಇರುತ್ತವೆ. ಇದು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇರುತ್ತದೆ.

3.ಸಂದರ್ಶನ -ಮುಖ್ಯ ಪರೀಕ್ಷೆಯಲ್ಲಿ ಆಯ್ಕೆ ಆದವರನ್ನು ಸಂದರ್ಶನಕ್ಕೆ ಆಹ್ವಾನ ಮಾಡಲಾಗುವುದು. ಇದು 50 ಅಂಕಗಳನ್ನು ಒಳಗೊಂಡಿದೆ.

ಅರ್ಜಿ ಶುಲ್ಕ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆಯಾ ವರ್ಗಕ್ಕೆ ಸಂಬಂಧಪಟ್ಟಂತೆ ಶುಲ್ಕ ಪಾವತಿ ಮಾಡಬೇಕು.ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.

  • ಸಾಮಾನ್ಯ ಅಭ್ಯರ್ಥಿಗಳಿಗೆ – 600
  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ -300
  • ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ – ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ..?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು kpsc ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.

1.ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಒಂದು ಬಾರಿ ನೋಂದಣಿ ಪ್ರಕ್ರಿಯೆ ನೋಂದಣಿ ಮಾಡಿಕೊಳ್ಳಬೇಕು.

2.ಅದರಲ್ಲಿ ಅಭ್ಯರ್ಥಿಗಳು ತಮ್ಮ ವಿವರ, ವೈಯಕ್ತಿಕ ವಿವರ , ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಮೀಸಲಾತಿ ಕೋರಿದ್ದಲ್ಲಿ ಅದನ್ನು ಅಪ್ಲೋಡ್ ಮಾಡಬೇಕು.

3. ಅರ್ಜಿ ಶುಲ್ಕವನ್ನು ಆನ್ಲೈನ್ ನಲ್ಲಿ ಪಾವತಿ ಮಾಡಬೇಕು.

4.ಎಲ್ಲಾ ವಿವರ ತುಂಬಿದ ಬಳಿಕ apply ಬಟನ್ submit ಮಾಡಿದ ನಂತರ ಅಪ್ಲಿಕೇಶನ್ ಪ್ರಿಂಟ್ out ತೆಗೆದುಕೊಳ್ಳಬೇಕು.

5.ಪ್ರವೇಶ ಪತ್ರಿಕೆ ಬಿಡುಗಡೆ ದಿನಾಂಕವನ್ನು ಇಮೇಲ್ ಮತ್ತು sms ಮೂಲಕ ತಿಳಿಸಲಾಗುವುದು.

ಪ್ರಮುಖ ದಿನಾಂಕಗಳು.

  • ಅರ್ಜಿ ಪ್ರಾರಂಭ ದಿನಾಂಕ – 1 ಆಗಸ್ಟ್ 2026
  • ಕೊನೆ ದಿನಾಂಕ -31 ಆಗಸ್ಟ್ 2026.
  • ಪೂರ್ವ ಭಾವಿ ಪರೀಕ್ಷೆ – 15 ನವೆಂಬರ್ 2026

Leave a Comment