NICL ನೇಮಕಾತಿ 2026 – 500 ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ , 40,000 ವೇತನ
ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಸೈನ್ಮೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. 500 ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಇದು ಒಂದು ಸರ್ಕಾರಿ ವಲಯದ ಕಂಪನಿಯಾಗಿದ್ದು ಎಲ್ಲಾ ಕಡೆ ಶಾಖೆಗಳನ್ನು ಒಂದಿದೆ.ಆನ್ಲೈನ್ ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿದ್ದು, ಆನ್ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆ ಆದವರಿಗೆ 40000 ವೇತನ ಮತ್ತು ಇತರೆ ಸೌಲಭ್ಯಗಳು ಸಿಗುತ್ತವೆ. ಈ ಪೋಸ್ಟ್ ನಲ್ಲಿ ಹುದ್ದೆಗಳ ವಿವರ, ಅರ್ಹತೆ , ಪರೀಕ್ಷೆ ವಿಧಾನ , ಅರ್ಜಿ ಸಲ್ಲಿಸುವ ವಿಧಾನ ತಿಳಿಸಲಾಗುವುದು.
NICL ನೇಮಕಾತಿ 2026 -highlights
- ನೇಮಕಾತಿ ಸಂಸ್ಥೆ – ನ್ಯಾಷನಲ್ ಇನ್ಶೂರೆನ್ಸ್ ಕಂಪನಿ.
- ಹುದ್ದೆಯ ಹೆಸರು – ಅಸೈನ್ಮೆಂಟ್
- ಹುದ್ದೆಗಳ ಸಂಖ್ಯೆ -500
- ಉದ್ಯೋಗ ಸ್ಥಳ -ಭಾರತ
- ವೇತನ -40,000
ವಯೋಮಿತಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿ ಹೊಂದಿರಬೇಕು.ವಯೋಮಿತಿಯು 1 ಜುಲೈ 2026 ರಂತೆ ಇರಬೇಕು.ಕನಿಷ್ಠ ವಯಸ್ಸು 21 ವರ್ಷ ಹಾಗೂ ಗರಿಷ್ಠ ವಯಸ್ಸು 30 ವರ್ಷ ಆಗಿರಬೇಕು.
ವಯೋಮಿತಿ ಸಡಿಲಿಕೆ.
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ -03 ವರ್ಷ
- sc/st ಅಭ್ಯರ್ಥಿಗಳಿಗೆ -05 ವರ್ಷ
- pwd ಅಭ್ಯರ್ಥಿಗಳಿಗೆ -10 ವರ್ಷ
ಮೀಸಲಾತಿ ಕೋರಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅದಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ದಾಖಲೆ ಪರಿಶೀಲನೆ ಸಮಯದಲ್ಲಿ ಹಾಜರು ಪಡಿಸಬೇಕು.
ಶೈಕ್ಷಣಿಕ ವಿದ್ಯಾರ್ಹತೆ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಯು ಯಾವುದೇ ಪದವಿ ಪಡೆದಿರಬೇಕು.ಕೇಂದ್ರ ಸರ್ಕಾರದಿಂದ ಸಮಾನವೆಂದು ಅರ್ಹತೆ ಹೊಂದಿರಬೇಕು.
ಅಭ್ಯರ್ಥಿಯು 01-07-2026 ರೊಳಗೆ ಅರ್ಹತಾ ಪರೀಕ್ಷೆಯಲ್ಲಿ ಪಾಸಗಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿರಬೇಕು.
ಒಂದು ವೇಳೆ ಪರೀಕ್ಷೆ ಫಲಿತಾಂಶವನ್ನು ವಿಶ್ವವಿದ್ಯಾಲಯ ವೆಬ್ಸೈಟ್ ನಲ್ಲಿ ಪ್ರಕಟಣೆ ಮಾಡಿದರೆ ಆ ದಿನಾಂಕವನ್ನು ಸೂಚಿಸಬೇಕು.
ಅಭ್ಯರ್ಥಿಗಳು ಯಾವ ರಾಜ್ಯಕ್ಕೆ ಅರ್ಜಿ ಸಲ್ಲಿಸುತ್ತಾರೋ ಆಯಾ ರಾಜ್ಯದ ಪ್ರಾದೇಶೀಕ ಭಾಷೆಯನ್ನ ಓದಲು ಮತ್ತು ಬರೆಯಲು ಬರಬೇಕು.
ಅರ್ಜಿ ಶುಲ್ಕ.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಈ ಶುಲ್ಕವು refund ಆಗುವುದಿಲ್ಲ.ಶುಲ್ಕ ಪಾವತಿ ಮಾಡುವ ಕಡೇ ದಿನಾಂಕ ಆಗಸ್ಟ್ 17.
- Sc/st/pwd -ಯಾವುದೇ ಶುಲ್ಕವಿಲ್ಲ.
- ಇತರೆ ಅಭ್ಯರ್ಥಿಗಳು – 500
ಆಯ್ಕೆ ಪ್ರಕ್ರಿಯೆ.
ಅಭ್ಯರ್ಥಿಗಳನ್ನು 3 ಹಂತಗಳಲ್ಲಿ ಆಯ್ಕೆ ಮಾಡಲಾಗುವುದು.
1.Preliminary exam -ಪೂರ್ವಭಾವಿ ಪರೀಕ್ಷೆಯು ಆನ್ಲೈನ್ ನಲ್ಲಿ ನಡೆಸಲಾಗುತ್ತದೆ.ಒಟ್ಟು 100 ಪ್ರಶ್ನೆಗಳಿವೆ ಹಾಗೂ 100 ಅಂಕಗಳನ್ನು ಒಳಗೊಂದಿರುತ್ತದೆ.
| English | 30 | 30 | 20 minutes |
| Reasoning ability | 35 | 35 | 20 minutes |
| Quantitve apptitude | 35 | 35 | 20 minutes |
Main examination.
ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ.ಇದು ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು 200 ಅಂಕಗಳನ್ನು ಒಳಗೊಂಡಿದ್ದು 120 ನಿಮಿಷಗಳನ್ನು ಒಳಗೊಂಡಿದೆ.
| English | 40 | 40 | 30 minites |
| Reasoning | 40 | 40 | 30 minites |
| Numarical ability | 40 | 40 | 30 minites |
| Generate awarness | 40 | 40 | 15 minites |
| computer | 40 | 40 | 15 minites |
ತಪ್ಪು ಉತ್ತರಕ್ಕೆ 0.35 ಅಂಕಕಳೆಯಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
1.ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
2.Assistant notification ಮೇಲೆ ಕ್ಲಿಕ್ ಮಾಡಬೇಕು.
3.New registration ಮೇಲೆ ಕ್ಲಿಕ್ ಮಾಡಿ. ರಿಜಿಸ್ಟರ್ ಮಾಡಬೇಕು. User name ಮತ್ತು ಪಾಸ್ವರ್ಡ್ generate ಆಗುತ್ತದೆ.
4.ನಿಮ್ಮ ಪಾಸ್ಪೋರ್ಟ್ ಫೋಟೋ , ಸಹಿ, ಘೋಷಣೆ ಪತ್ರ, ಅಪ್ಲೋಡ್ ಮಾಡಬೇಕು.
5.ಆನ್ಲೈನ್ ನಲ್ಲಿ ಶುಲ್ಕ ಪಾವತಿ ಮಾಡಬೇಕು.
6.ಎಲ್ಲಾ ವಿವಿರ ಸರಿಯಾಗಿದೆ ಎಂದು ಪರಿಶೀಲನೆ ಮಾಡಿ submit ಬಟನ್ ಒತ್ತಿ.
7.Application form print out ತೆಗೆದು ಕೊಳ್ಳಿ.