ಸ್ನೇಹಿತರೆ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಬ್ಯಾಂಕ್ ಆಫ್ ಬರೋಡ ( bank of baroda ) ಒಂದು. ಈ ಬ್ಯಾಂಕ್ ಒಟ್ಟು 2482 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಬ್ಯಾಂಕ್ ಉದ್ಯೋಗ ಹುಡುಕುತಿರುವ ಹುದ್ದೆಗಳಿಗೆ ಒಂದು ಸುವರ್ಣ ಅವಕಾಶವಾಗಿದೆ. ಆಯ್ಕೆ ಆದವರಿಗೆ ಉತ್ತಮ ವೇತನ, ಮತ್ತು ಸೌಲಭ್ಯ ದೊರೆಯಲಿದೆ.ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದೆ.
ಈ ಪೋಸ್ಟ್ ನಲ್ಲಿ ಅರ್ಹತೆ, ಶುಲ್ಕ , ಪರೀಕ್ಷೆ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಂತಾದವುಗಳ ಬಗ್ಗೆ ತಿಳಿಸಲಾಗುವುದು. ಅರ್ಜಿ ಸಲ್ಲಿಸಲು ಕೊನೆ ದಿನ ಸೆಪ್ಟೆಂಬರ್ 07 ಕೊನೆಯ ದಿನ.
ಬ್ಯಾಂಕ್ ಆಫ್ ಬರೋಡದಲ್ಲಿ ನೇಮಕಾತಿ 2026.
ನೇಮಕಾತಿ ಸಂಸ್ಥೆ – ಬ್ಯಾಂಕ್ ಆಫ್ ಬರೋಡ
ಹುದ್ದೆಯ ಹೆಸರು – ಲೋಕಲ್ ಬ್ಯಾಂಕ್ ಆಫೀಸರ್
ಹುದ್ದೆಗಳ ಸಂಖ್ಯೆ 2482
ಅರ್ಜಿ ಸಲ್ಲಿಸುವ ವಿಧಾನ -. ಆನ್ಲೈನ್
ಕೊನೆ ದಿನ – ಸೆಪ್ಟೆಂಬರ್ 07.
ವಯೋಮಿತಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿ ಹೊಂದಿರಬೇಕು.
- ಕನಿಷ್ಠ ವಯೋಮಿತಿ – 21 ವರ್ಷ
- ಗರಿಷ್ಠ ವಯೋಮಿತಿ -30 ವರ್ಷ.
ವಯೋಮಿತಿ ಸಡಿಲಿಕೆ.
- Sc/St ಅಭ್ಯರ್ಥಿಗಳಿಗೆ – 05 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ -03 ವರ್ಷ
- pwd ಅಭ್ಯರ್ಥಿಗಳಿಗೆ – 10 ವರ್ಷ
ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಾಖಲೆ ಪರಿಸೀಲನೆ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ಹಾಜರಿ ಪಡಿಸಬೇಕು.
ಶೈಕ್ಷಣಿಕ ಅರ್ಹತೆ.
ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು.
ವಾಣಿಜ್ಯ ಬ್ಯಾಂಕ್ ಗಳಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಆಯಾ ರಾಜ್ಯಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆ ರಾಜ್ಯದ ಸ್ಥಳೀಯ ಭಾಷೆ ಗೊತ್ತಿರಬೇಕು.
ಅರ್ಜಿ ಶುಲ್ಕ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಶುಲ್ಕ ಪಾವತಿ ಮಾಡಬೇಕು.
- ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ -850 ರೂ
- Sc/St ಮಹಿಳಾ ಅಭ್ಯರ್ಥಿಗಳಿಗೆ -175 ರೂ.
ಆಯ್ಕೆ ಪ್ರಕ್ರಿಯೆ.
ಅಭ್ಯರ್ಥಿಗಳನ್ನು ಆನ್ಲೈನ್ test , interview ಮೂಲಕ ಆಯ್ಕೆ ಮಾಡಲಾಗುವುದು.
| English language | 30 | 30 | 30 mintes |
| banking awarness | 30 | 30 | 30 minites |
| General awareness | 30 | 30 | 30 minites |
| Reasoning ability | 30 | 30 | 30 minites |
ತಪ್ಪು ಉತ್ತರಗಳಿಗೆ 0.25 ಅಂಕ ಕಳೆಯಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ.
ಆಸಕ್ತಿ ಹೊಂದಿದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
www.bankofbaroda.bank.in/Career.htm
2.ಬ್ಯಾಂಕ್ ನ career page ಗೆ ಭೇಟಿ ನೀಡಬೇಕು. ನಂತರ ನೋಟಿಫಿಕೇಟಿನ್ ಮೇಲೆ click ಮಾಡಬೇಕು. Register ಮಾಡುವ ವೇಳೆ ಅಭ್ಯರ್ಥಿಗಳು ತಮ್ಮ ವಯಕ್ತಿಕ ವಿವರಗಳನ್ನು ತುಂಬಬೇಕು.
3.ಫೋಟೋ, ಸಹಿ, ಹೆಬ್ಬೆತ್ತಿನ ಗುರುತು , ಘೋಷಣೆ ಪತ್ರಗಳನ್ನು ಅಪ್ಲೋಡ್ ಮಾಡಬೇಕು.
4.ಶುಲ್ಕ ಪಾವತಿ ಮಾಡಿದ ಬಳಿಕ ಅದರ ರಸೀದಿಯನ್ನು ಪ್ರಿಂಟ್ ತೆಗೆದು ಕೊಳ್ಳ ಬೇಕು ನಂತರ ಅಪ್ಲಿಕೇಶನ್ ಫಾರಂ ನ್ನು ಪ್ರಿಂಟ್ ತೆಗೆದುಕೊಳ್ಳಬೇಕು.